ಈ ಬಾರಿ ಕೂಡ ಮೋದಿ ಮಂಗಳೂರಿಗೆ ಬಂದಾಗ ತಿನ್ನುವರೇ ಮೂಡೆ ತೋವೆ ಮತ್ತು ಸಜ್ಜಿಗೆ ಬಜಿಲ್?

ಈ ಬಾರಿ ಕೂಡ ಮೋದಿ ಮಂಗಳೂರಿಗೆ ಬಂದಾಗ ತಿನ್ನುವರೇ ಮೂಡೆ ತೋವೆ ಮತ್ತು ಸಜ್ಜಿಗೆ ಬಜಿಲ್?

April 3: 2017ರ ಡಿಸೆಂಬರ್ ನಲ್ಲಿ ಮಂಗಳೂರಿಗೆ ಬಂದು ಲಕ್ಷದ್ವೀಪಕ್ಕೆ ಹೋಗುವ ಸಂದರ್ಭದಲ್ಲಿ ಇಲ್ಲಿಯ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಿಂದು ಹೋಗಿದ್ದರು ಎನ್ನುವ ಸುದ್ದಿ ಎಲ್ಲಡೆ ಹರಡಿತ್ತು. ಹಾಗಾದರೆ ಈ ಬಾರಿ ಕೂಡ ಮಂಗಳೂರಿಗೆ ಬಂದಾಗ ನರೇಂದ್ರ ಮೋದಿ ಯವರು ಕಳೆದ ಬಾರಿ ತಿಂದಂತೆ ಮೂಡೆ ತೋವೆ, ಸಜ್ಜಿಗೆ ಬಜಿಲ್, ಸಂಜೀರಾ, ಬಿಸ್ಕೆಟ್ ರೊಟ್ಟಿ, ರಾಗಿ ಮಣ್ಣಿ, ತೆಂಗಿನ ಕಾಯಿ ಚಟ್ನಿಯೊಂದಿಗೆ ನೀರು ದೋಸೆ ತಿನ್ನುವರೇ ಎನ್ನುವ ಕುತೂಹಲ ಮಂಗಳೂರಿನ ಜನತೆಯಲ್ಲಿ ಮೂಡಿದೆ. ಟೀ, ಕಾಫಿ ಕುಡಿಯದ ಮೋದಿ ಕಲ್ಲಂಗಡಿ ಜ್ಯೂಸ್ ಕುಡಿದಿದ್ದರು ಅನ್ನುವುದು ಎಲ್ಲರ ಗಮನ ಸೆಳೆದಿತ್ತು.

ನರೇಂದ್ರ ಮೋದಿ ಮಂಗಳೂರಿಗೆ ಏಪ್ರಿಲ್ 13 ರಂದು ಬರಲಿದ್ದು ಮಂಗಳೂರಿನ ಯಾವ ಯಾವ ತಿಂಡಿ ತಿನಿಸನ್ನು ಸವಿಯಲಿದ್ದಾರೆ ಅನ್ನುವ ಪ್ರಶ್ನೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಮೂಡಿದೆ!

Photo Credits: Manju Neereshwallya

Latest News
also read