ಋಗ್ ಉಪಾಕರ್ಮ ಪ್ರಯುಕ್ತ ಕಾಶಿ ಮಠಾಧೀಶರಿಂದ ಭಜಕರಿಗೆ ಯಜ್ನೋ ಪವಿತ ಧಾರಣೆ

ಋಗ್ ಉಪಾಕರ್ಮ ಪ್ರಯುಕ್ತ ಕಾಶಿ ಮಠಾಧೀಶರಿಂದ ಭಜಕರಿಗೆ ಯಜ್ನೋ ಪವಿತ ಧಾರಣೆ

ಮಂಗಳೂರು : ಋಗ್ ಉಪಾಕರ್ಮ ಪ್ರಯುಕ್ತ ಚಾತುರ್ಮಾಸ ವ್ರತ ಆಚರಿಸುತಿರುವ ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಇಂದು ಪ್ರಾತಃ ಕಾಲ ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ವ್ಯಾಸರಘುಪತಿ ನರಸಿಂಹ ಹಾಗೂ ಪರಿವಾರ ದೇವರಿಗೆ ಯಜ್ನೋ ಪವಿತ ಧಾರಣೆ ಶ್ರೀಗಳವರ ದಿವ್ಯ ಹಸ್ತಗಳಿಂದ ಉಡುಪಿ ಜಿಲ್ಲೆಯ ಕೋಟ ಶ್ರೀ ಕಾಶಿ ಮಠ ದಲ್ಲಿ ನೆರವೇರಿತು . ಬಳಿಕ ನೆರೆದ ಸಮಾಜ ಬಾಂಧವರಿಗೆ ಯಜ್ನೋ ಪವಿತ ಧಾರಣೆ ನೆರವೇರಿತು . ಮುಂಬೈ , ಕೇರಳ , ಬೆಂಗಳೂರು , ಉಡುಪಿ , ದಕ್ಷಿಣ ಕನ್ನಡ ಜಿಲ್ಲೆ ಯ ಹಾಗೂ ಕೋಟ , ಕೋಟೇಶ್ವರ , ಕುಂದಾಪುರದ ನೂರಾರು ಭಗವತ್ ಭಕ್ತರು ಪಾಲ್ಗೊಂಡರು .

ಚಿತ್ರಗಳು : ಮಂಜು ನೀರೇಶ್ವಾಲ್ಯ

Latest News