ಐಸಿಎಸ್‍ಐ ದಕ ಶಾಖೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಸೋನಾಲಿ ಸುರೇಶ್ ಮಲ್ಯ ಆಯ್ಕೆ
ಐಸಿಎಸ್‍ಐ ದಕ ಶಾಖೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಸೋನಾಲಿ ಸುರೇಶ್ ಮಲ್ಯ ಆಯ್ಕೆ
ಐಸಿಎಸ್‍ಐ ದಕ ಶಾಖೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಸೋನಾಲಿ ಸುರೇಶ್ ಮಲ್ಯ ಆಯ್ಕೆ. ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ
ಇನ್ಸ್‍ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರಿಸ್ ಆಫ್ ಇಂಡಿಯಾ(ಐಸಿಎಸ್‍ಐ) ದ.ಕ ಮತ್ತು ಉಡುಪಿ ಶಾಖೆಯ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಸೋನಾಲಿ ಸುರೇಶ್ ಮಲ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ಜ.18ರಂದು ಸಂಸ್ಥೆಯಲ್ಲಿ ಜರುಗುವ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ನಿಗರ್ಮಿತ ಅಧ್ಯಕ್ಷ ಅಕ್ಷಯ್ ಆರ್ ಶೇಟ್ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಸೋನಾಲಿ ಮಲ್ಯ ಅವರು ಸಂಸ್ಥೆಯ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಹಾಗೂ ಅತಿಥಿ ಉಪನ್ಯಾಸಕರಾಗಿ ಸಕ್ರೀಯವಾಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರು ಶಾಲಾ ಶಿಕ್ಷಣವನ್ನು ಬೆಸೆಂಟ್ ವಿದ್ಯಾಭ್ಯಾಸದಲ್ಲಿ ಪೂರೈಸಿಕೊಂಡು ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿ ನಂತರ ಎಸ್‍ಡಿಎಂ ಆಡಳಿತ ವ್ಯವಹಾರ ಶಿಕ್ಷಣ ಸಂಸ್ಥೆಯಲ್ಲಿ ಪದವಿಯನ್ನು ಪಡೆದುಕೊಂಡು ಬೆಂಗಳೂರಿನ ಸಂತ ಜೋಸೆಫ್‍ನಲ್ಲಿ ಪಿಜಿ ಪದವಿ ಪಡೆದು ದಿಲ್ಲಿಯ ಐಸಿಎಸ್‍ಐಯಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.