ಕಳೆದ ವಾರ ಇವರ ತಲೆಯ ಸರ್ಜರಿ, ನಿನ್ನೆ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲೂ ವೋಟ್ ಮಾಡಿದ ೯೦ ವಯಸ್ಸಿನ ಮಂಗಳೂರಿನ ವಯೋವೃದ್ಧ.

ಕಳೆದ ವಾರ ಇವರ ತಲೆಯ ಸರ್ಜರಿ, ನಿನ್ನೆ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲೂ ವೋಟ್ ಮಾಡಿದ ೯೦ ವಯಸ್ಸಿನ ಮಂಗಳೂರಿನ ವಯೋವೃದ್ಧ.

April 18: ಇವರ ಈ ಕಥೆ ಕೇಳಿದರೆ ಯಾರಿಗಾದರೂ ಕಣ್ಣಿನಲ್ಲಿ ನೀರು ಜಾರುವುದು ಖಂಡಿತ. ದಾಮೋದರ್ ನಾಯಕ್ ಕಲ್ಯಾಣಪುರ್ ಅವರಿಗೀಗ ೯೦ ವರ್ಷ. ಕಳೆದ ತಿಂಗಳು ಸುಮಾರು ೭-೮ ಸೆಂಟಿಮೀಟರ್ ನ ಇವರ ತಲೆಯ ಭಾಗದಲ್ಲೊಂದು ಸಣ್ಣ ಕುರ ಕಾಣಿಸಿಕೊಂಡಿದೆ ಅದನ್ನು ನೋಡಿದ ವೈದ್ಯರು ಇದನ್ನು ಸರ್ಜರಿ ಮಾಡಿ ಆದಷ್ಟು ಬೇಗ ತೆಗೆಯಲೇಬೇಕು ಎಂದು ಹೇಳಿದ್ದಾರೆ, ಇದನ್ನು ಕೇಳಿದ ಅವರ ಮಕ್ಕಳು ಮೊನ್ನೆ ಯೆನೆಪೋಯ ಹಾಸ್ಪಿಟಲ್ ನಲ್ಲಿ ಆಪರೇಷನ್ ಮಾಡಿಸಿದ್ದಾರೆ. ಸುಮಾರು ೬-೭ ಘಂಟೆಯ ಆಪರೇಷನ್ ಅದು. ವೈದ್ಯೆರೆ ಹೇಳುವ ಪ್ರಕಾರ ಈ ವಯಸ್ಸಿನಲ್ಲಿ ಆಪರೇಷನ್ ಮಾಡಿ ಯಾವುದೇ ರೋಗಿಯನ್ನು ಬದುಕಿಸಿಯುವುದು ಅಷ್ಟು ಸಾಮಾನ್ಯವಾದ ಕೆಲಸವಲ್ಲ. ಯಶಸ್ವಿ ಆಪರೇಷನ್ ನ ನಂತರ ಮನೆಗೆ ಬಂದ ಎರಡು ದಿನದಲ್ಲೇ ಅವರ ಜೊತೆಗೆ ಕುಟುಂಬದವರಿಗೆಲ್ಲ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ ಅದೇನೆಂದರೆ ದಾಮೋದರ ನಾಯಕ್ ಅವರ ಪತ್ನಿ ಶ್ರೀಮತಿ ಶಾಂತಿ ನಾಯಕ್ (೭೯) ಅವರು ಸಾವನ್ನಪ್ಪಿದ್ದಾರೆ. ಇದನ್ನು ಕೇಳಿ ಅವ್ರಿಗೆ ನೋವಾದರೂ ಯಾರಿಗೂ ತೋರಿಸದೆ ಇಂದು ಮಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ.


ಈ ವಯಸ್ಸಿನಲ್ಲಿಯೂ ಮತ ಚಲಾವಣೆಯ ಪ್ರಾಮುಖ್ಯತೆಯನ್ನು ಯುವ ಜನತೆಗೆ ತೋರಿಸಿ ಕೊಟ್ಟಿದ್ದಾರೆ ಇಷ್ಟೆಯಲ್ಲದೆ ಸಾವಿನ ಮನೆಗೆ ಬಂದಿದ್ದ ಮಕ್ಕಳು ಹಾಗು ಮೊಮ್ಮಕ್ಕಳಿಗೂ ತಮ್ಮ ತಮ್ಮ ಕ್ಷೇತ್ರಕ್ಕೆ ತೆರಳಿ ಮತ ಚಲಾಯಿಸಿ ಎಂದಿದ್ದಾರೆ.
ಮತ ಚಲಾಯಿಸದೆ ಮನೆಯಲ್ಲೇ ಕುಳಿತುಕೊಳ್ಳುವ, ಪ್ರವಾಸಕ್ಕೆ ತೆರಳುವವರಿಗೆ ಈ ಕಥೆ ಸ್ಪೂರ್ತಿಯಾಗಲಿ ಎಂಬುವುದೇ ಈ ಬರವಣಿಗೆಯ ಉದ್ದೇಶ.

Latest News
also read