ಕಾಶೀ ಮಠಾಧೀಶರ ದಿಗ್ವಿಜಯ

ಕಾಶೀ ಮಠಾಧೀಶರ ದಿಗ್ವಿಜಯ

ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವೃತವು ಕೋಟಾ ಶ್ರೀ ಕಾಶೀಮಠದ ಶ್ರೀ ಮುರಳೀಧರ ಕೃಷ್ಣ ದೇವಳದಲ್ಲಿ ಸಂಪನ್ನಗೊಂಡಿದ್ದು ಆ ಪ್ರಯಕ್ತ “ಚಾತುರ್ಮಾಸ ದಿಗ್ವಿಜಯ” ಮಹೋತ್ಸವವನ್ನು ಇದೇ ಬರುವ ಶನಿವಾರ ದಿನಾಂಕ :೧೯-10-2017 ರಂದು ಕೋಟಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಶ್ರೀಗಳವರ ದಿಗ್ವಿಜಯ ಮಹೋತ್ಸವವು ಕೋಟಾ ಶ್ರೀ ಕಾಶೀಮಠದಿಂದ ಸಾಯಂಕಾಲ 6.00 ಗಂಟೆಗೆ ಪ್ರಾರಂಭಗೊಳ್ಳಲಿದ್ದು,ಸುಮಾರು ೧೦ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೊಗಳ,ಕೇರಳದ ವಿಶೇಷ ಚಂಡೆ ವಾದನ,ಪಂಚವಾದ್ಯಗಳು,ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ,ಹುಲಿವೇಷ,ಸ್ತಬ್ಧಚಿತ್ರಗಳು ದಿಗ್ವಿಜಯ ಯಾತ್ರೆಯಲ್ಲಿಪಾಲ್ಗೋಳ್ಳಲಿರುವುರು.ದಿಗ್ವಿಜಯ ಯಾತ್ರೆ ನಡೆಯುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ,ತಳಿರು ತೋರಣಗಳಿಂದ ಅಲಂಕರಿಸಲಾಗುವುದು.
ಊರು ಪರವೂರುಗಳಿಂದ ಸಾವಿರಾರು ಜಿ.ಎಸ್.ಬಿ ಸಮಾಜ ಭಾಂಧವರು,ದೇವಳದ ಆಡಳಿತ ಮಂಡಳಿಯ ಪದಾದಿಕಾರಿಗಳು,ವಿವಿಧ ಭಜನಾಮಂಡಳಿಗಳು ಪಾಲ್ಗೋಳ್ಳೂವರು.ಸಮಾಜದ ದೇವಳಗಳ ಆಡಳಿತ ಮಂಡಳಿಯ ಪರವಾಗಿ ಶ್ರೀಗಳವರಿಗೆ ಹಾರಾರರ್ಪಣೆಗೆ ಅವಕಾಶವಿರುವುದು.ನೆರೆದ ಸ್ವಸಮಾಜ ಭಾಂದವರಿಗೆ ಶ್ರೀಗಳವರ ದಿವ್ಯ ಹಸ್ತಗಳಿಂದ ಮಂತ್ರಾಕ್ಷತೆಯನ್ನು ನೀಡಲು ಶ್ರೀಗಳವರಲ್ಲಿ ವಿನಂತಿಸಲಾಗಿದೆ.
ದಿಗ್ವಿಜಯ ಯಾತ್ರೆಯು ಕೋಟಾ ಕಾಶಿ ಮಠದಿಂದ ಪ್ರಾರಂಭಗೊಂಡು ಉತ್ತರ ಕೋಟದಿಂದ ಮಣೂರು ರಾಷ್ಟ್ರೀಯ ಹೆದ್ದಾರಿ ಮೂಲಕ ದಕ್ಷಿಣ ಕೋಟಾ ಕಡೆಗೆ ತಲುಪಿ ಶ್ರೀದೇವಳಕ್ಕೆ ಹಿಂತಿರುಗಲಿರುವುದು.ಈ ಎಲ್ಲಾ ಪ್ರದೇಶಗಳಲ್ಲಿ ವಿಶೇಷ ಊಟ,ಉಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ದಿಗ್ವಿಜಯ ಯಾತ್ರೆಗೆ ಆಗಮಿಸಲಿರುವ ಎಲ್ಲಾ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಗಾಂಧಿ ಮೈದಾನ , ಶಂಭವಿ ಶಾಲೆಯ ಮೈದಾನ , ಸ್ಪರ್ಶ ಮೈದಾನ ಮಣೂರುನಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಹಿಂದಿರುಗಲು ಕೋಟ ಬಸ್ ಸ್ಟಾಂಡ್ ಬಳಿಯಿಂದ ಸೈಬರಕಟ್ಟೆ , ಉಡುಪಿ , ಕುಂದಾಪುರ ಕಡೆಗೆ ತೆರಳಲು ಬಸ್ಸ ವ್ಯವಸ್ಥೆ ಮಾಡಲಾಗಿದೆ .
ಕೋಟಾ ದಲ್ಲಿ ನಡೆಯಲಿರುವ ಈ ದಿಗ್ವಿಜಯ ಮಹೋತ್ಸವಕ್ಕೆ ಗೌಡ ಸಾರಸ್ವತ ಸಮಾಜದ ಎಲ್ಲಾ ಭಗವಧ್ಬಕ್ತರು ಪಾಲ್ಗೋಂಡು ಶ್ರೀ ಹರಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಚಾತುರ್ಮಾಸ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್ , ಕಾರ್ಯದರ್ಶಿ ವೇದವ್ಯಾಸ್ ಪೈ , ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ವಿನಂತಿಸಿಕೊಂಡಿದ್ದಾರೆ.

Latest News

Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read