ಕೃಷ್ಣಾಪುರ: ಇತ್ತೀಚಿಗೆ ಅನಾರೋಗ್ಯ ನಿಮಿತ್ತ ಇಹಲೋಕ ತ್ಯಜಿಸಿದ ಬಿಜೆಪಿ ಕಾರ್ಯಕರ್ತನ ಮನೆಗೆ ಶಾಸಕರ ಭೇಟಿ

ಕೃಷ್ಣಾಪುರ: ಇತ್ತೀಚಿಗೆ ಅನಾರೋಗ್ಯ ನಿಮಿತ್ತ ಇಹಲೋಕ ತ್ಯಜಿಸಿದ ಬಿಜೆಪಿ ಕಾರ್ಯಕರ್ತನ ಮನೆಗೆ ಶಾಸಕರ ಭೇಟಿ

ಅನಾರೋಗ್ಯ ನಿಮಿತ್ತ ಮರಣಹೊಂದಿದ ಕೃಷ್ಣಾಪುರ 4ನೇ ವಾರ್ಡಿನ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾದ ಕೇಶವ ಶೆಟ್ಟಿ ಯವರ ಮನೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಭೇಟಿ ನೀಡಿ ಶೃಧ್ಧಾಂಜಲಿ ಸಲ್ಲಿಸಿದರು. ಯಜಮಾನನನ್ನು ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡುವ ಜೊತೆಗೆ ಅವರ ದುಃಖವನ್ನು ಆಲಿಸಿ, ಅಗತ್ಯ ನೆರವನ್ನು ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮನಪಾ ಸದಸ್ಯ ತಿಲಕ್ ರಾಜ್ ಕೃಷ್ಣಾಪುರ, ರಘುವೀರ್ ಪಣಂಬೂರು, ಬಿಜೆಪಿ 4ನೇ ವಾರ್ಡ್ ಸಮಿತಿಯ ಪ್ರಶಾಂತ್ ಆಚಾರ್ಯ, ಪುಷ್ಪರಾಜ್ ಮೂಲ್ಯ, ಶೇಖರ ದೇವಾಡಿಗ, ರೋಶನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ, ರಾಕೇಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Latest News