ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆಯು ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿ

ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆಯು ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿ

ಸಮೀರ್ ಪುತ್ತೂರು ಬಸ್ ನಿರ್ವಾಹಕ ನ ಪ್ರಾಮಾಣಿಕತೆ ಬಗ್ಗೆ ಹೇಳಿದ್ದಾರೆ.
“ನಾನು 21/8/19 ರಂದ ಕಾರ್ಯ ನಿಮಿತ್ತ ಮಂಗಳೂರಿಗೆ ಪ್ರಯಾಣಿಸಿದ್ದೆ ವಾಪಸ್ ಪುತ್ತೂರಿಗೆ ಹಿಂತಿರುಗಲು ಮಹೇಶ್ ಬಸ್ ಹತ್ತಿದೆ ಕಂಡಕ್ಟರ್ ಟಿಕೇಟ್ ನೀಡಿದರು ನಾನು ಹಣ ನೀಡಲು ಜೇಬಿಗೆ ಕೈ ಹಾಕಿದಾಗ ನನ್ನ ಜೇಬಲ್ಲಿ ಪರ್ಸ್ ಇರಲಿಲ್ಲ ಪರ್ಸ್ ಎಲ್ಲೋ ಕಳೆದು ಹೋಗಿತ್ತು
ನನಗೆ ಪರ್ಸ್ ಕಳೆದು ಹೋದ ದುಖ ಒಂದು ಕಡೆಯಾದರೆ ಪ್ರಯಾಣಿಕರ ಎದುರಲ್ಲಿ ಕಂಡಕ್ಟರ್ ನನ್ನನ್ನು ಯಾವ ರೀತಿ ಹೀಯಾಳಿಸಬಹುದು ಎನ್ನುವ ಆತಂಕ ಇನ್ನೂಂದು ಕಡೆ
ಇವೆಲ್ಲವನ್ನೂ ಹತ್ತಿರದಿಂದ ಗಮನಿಸುತ್ತಿದ್ದ ಕಂಡಕ್ಟರ್ ಹತ್ತಿರ ಎಲ್ಲವನ್ನೂ ವಿವರಿಸಿದೆ
ಆಗ ಕಂಡಕ್ಟರ್ ಸಾರ್ ನನ್ನ ಬೆನ್ನು ತಟ್ಟಿ ಹೇಳಿದ ಒಂದು ಮಾತು ಈಗಲೂ ನನ್ನ ಕಣ್ಣಂಚಿನಲ್ಲಿ ನೀರು ಜಿಣುಗುಟ್ಟುತ್ತಿದೆ ನಿನ್ನ ಟಿಕೇಟ್ ಹಣ ನಾನು ಹಾಕುತ್ತೇನೆ (ಮೂಜಿ ದಿನತ ಬದ್ ಕ್ ಡ್ ದುಡ್ಡುಗು ಬೆಲೆ ಕೊರಿಯೆರೆ ಬಲ್ಲಿ ಪ್ರೀತಿಗ್ ಮಾನವೀಯತೆಗ್ ಬೆಲೆ ಕೊರೊಡು)
ಮೂರು ದಿನದ ಬದುಕಿನಲ್ಲಿ ದುಡ್ಡಿಗೆ ಬೆಲೆ ಕೊಡಬಾರದು ಪ್ರೀತಿಗೆ ಮಾನವೀಯತೆಗೆ ಬೆಲೆಕೊಡಬೇಕು ಎಂದು.

ಅದೂ ಅಲ್ಲದೆ ನಾನೋರ್ವ ಮುಸ್ಲೀಂಮನಾಗಿದ್ದೆ ಅವರು ಹಿಂದೂವಾಗಿದ್ದರು
ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವ ಈ ಜಿಲ್ಲೆಯಲ್ಲಿ ಮಾನವೀಯತೆಯು ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿ”.

ಇದು ನಮ್ಮ ತುಳುನಾಡು. ನಮ್ಮ ಹೆಮ್ಮೆಯ ನಡು.

Latest News
also read