ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಥುನ್ ಹೇಳಿಕೆಯೇ ಬಿಜೆಪಿ ಗೆಲುವಿಗೆ ಹಾದಿಯಾಗಲಿದೆಯೇ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಥುನ್ ಹೇಳಿಕೆಯೇ ಬಿಜೆಪಿ ಗೆಲುವಿಗೆ ಹಾದಿಯಾಗಲಿದೆಯೇ !

April 3: ದಕ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಅವರ “ತದನಂತರ – ಮಗದೊಮ್ಮೆ” ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.ಮಿಥುನ್ ತನ್ನ ಭಾಷಣದಲ್ಲಿ ಪದೇ ಪದೇ ಉಚ್ಚರಿಸುತ್ತಿದ್ದ ತದನಂತರ ಹೇಳಿಕೆಯನ್ನೇ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆಯಾಗಿ ಬದಲಿಸಿದ್ದು,ಈ ಬಾರಿ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಹೊಸ ಭಾಷ್ಯ ಬರೆಯಲಿದೆಯೇ ಎನ್ನುವ ಅನುಮಾನ ಸೃಷ್ಟಿಯಾಗಿದೆ.
ಭಾರತೀಯ ಜನತಾ ಪಾರ್ಟಿಯು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರ ಮಹಾ ಶಕ್ತಿಕೇಂದ್ರದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ “ಮೈ ಭಿ ಚೌಕಿದಾರ್” ಎನ್ನುವ ವಿಭಿನ್ನ ರೀತಿಯ ಕಾರ್ಯಕ್ರಮದುದ್ದಕ್ಕೂ ಮಿಥುನ್ ರೈ ಹೇಳಿಕೆಯನ್ನೇ ಮೋದಿ ಪರ ಘೋಷಣೆಯಾಗಿ ಭಾಜಪಾ ಕಾರ್ಯಕರ್ತರು ಪರಿವರ್ತಿಸಿದ್ದಾರೆ.
ಮಗದೊಮ್ಮೆ ಮೋದಿ ತದನಂತರ ಮೋದಿ ಎನ್ನುತ್ತಾ ನೂರಾರು ಕಾರ್ಯಕರ್ತರು ಪೇಟಾ ಧರಿಸಿ ಕಾಲ್ನಡಿಗೆಯ ಮೂಲಕ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದ ಪ್ರಾರಂಭವಾಗಿ ಸೆಂಟ್ರಲ್ ಮಾರ್ಕೇಟ್ ಮೂಲಕ ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಮುಕ್ತಾಯ ಕಂಡಿತು.
ಬಿಜೆಪಿ ಕಾರ್ಯಕರ್ತರ ಘೋಷಣೆಯ ವಿಡಿಯೋ ತುಣುಕು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದ್ದು ಎಲ್ಲೆಡೆ ಘೋಷಣೆಯದ್ದೇ ಕಾರುಬಾರು ಎನಿಸುವಂತಾಗಿದೆ.

Latest News