ನಮ್ಮಲ್ಲಿ ಹೊಡೆಯುವ ತಾಕತ್ತು ಇತ್ತು ಆದರೆ ಮುನ್ನಡೆಸುವ ಗುಂಡಿಗೆಯಲ್ಲಿ ಧಮ್ ಇರಲಿಲ್ಲ – ಸಂತೋಷ್ ಬಿ.ಎಲ್

ನಮ್ಮಲ್ಲಿ ಹೊಡೆಯುವ ತಾಕತ್ತು ಇತ್ತು ಆದರೆ ಮುನ್ನಡೆಸುವ ಗುಂಡಿಗೆಯಲ್ಲಿ ಧಮ್ ಇರಲಿಲ್ಲ – ಸಂತೋಷ್ ಬಿ.ಎಲ್

ಸದ್ಯ ಪಕ್ಷದ ಕಾರ್ಯಕರ್ತರಿಗೆ ಮನೆ ಮನೆಗೆ ತೆರಳಿ ಮತಯಾಚಿಸುವ ಅನುಕೂಲಕರ ವಾತಾವರಣವಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿ ಎಲ್ ಹೇಳಿದ್ದಾರೆ.
ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ವೈದ್ಯಕೀಯ ಪ್ರಕೋಷ್ಟದ ಸಭೆಯನ್ನು ಉದ್ಧೇಶಿಸಿ ಮಾತಾನಾಡಿದ ಅವರು,ಕಳೆದ ಐದು ವರ್ಷಗಳಿಂದ ಭಾರತದ ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಿದೆ.ಯಶಸ್ವಿ ರಾಜತಾಂತ್ರಿಕ ಸಂಬಂಧಗಳನ್ನು ಭದ್ರ ಪಡಿಸುವಲ್ಲಿ,ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ, ಅಭಿವೃದ್ಧಿ ವಿಚಾರಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕಾರ್ಯ ನಿರ್ವಹಿಸಿದೆ.ಹಾಗಾಗಿ ಮತಯಾಚನೆಗೆ ತೆರಳುವ ಕಾರ್ಯಕರ್ತರಿಗೆ ಯಾವುದೇ ಅಂಜಿಕೆಯಿಲ್ಲದೆ ಮನೆ,ಮನಗಳನ್ನು ತಲುಪಬಹುದಾಗಿದೆ ಎಂದು ಹೇಳಿದರು.ಈ ಹಿಂದೆಯೂ ಕೂಡ ಭಾರತಕ್ಕೆ ಭೂಮಿ,ಆಕಾಶದಲ್ಲಿ ಸಾಧಿಸುವ ತಾಕತ್ತು ಇತ್ತು.ಆದರೆ ಮುನ್ನಡೆಸುವವರ ಗುಂಡಿಗೆಯಲ್ಲಿ ಧಮ್ ಇರಲಿಲ್ಲ.ಅದು ನರೇಂದ್ರ ಮೋದಿಗೆ ಇದೆ ಎಂದರು.ತದ ನಂತರ ಮಾತನಾಡಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಮಹಿಳಾ ಸಬಲೀಕರಣ,ಬಡ ಜನರನ್ನೂ ಕೂಡ ತಲುಪಬಹುದಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವುದು ಹೇಗೆ ಎನ್ನುವುದನ್ನು ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಹ‌ಸಂಚಾಲಕ ಡಾ.ಅಣ್ಣಯ್ಯ ಕುಲಾಲ್,ಜಿಲ್ಲಾ ಪ್ರಕೋಷ್ಟದ ಸಂಚಾಲಕರಾದ ಡಾ.ರಾಘವೇಂದ್ರ ಭಟ್,ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ,ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸಚ್ಚಿದಾನಂದ ರೈ ಮತ್ತು ನೂರಾರು ವೈದ್ಯರು ಉಪಸ್ಥಿತರಿದ್ದರು

Latest News