ಪ್ರಧಾನಿ ಮೋದಿ ಪೇಟವನ್ನು ಖರೀದಿಸಿದ ಮಂಗಳೂರಿನ ಮಹಿಳೆ! ಇದರ ಬೆಲೆ ಗೊತ್ತ?

ಪ್ರಧಾನಿ ಮೋದಿ ಪೇಟವನ್ನು ಖರೀದಿಸಿದ ಮಂಗಳೂರಿನ ಮಹಿಳೆ! ಇದರ ಬೆಲೆ ಗೊತ್ತ?

ಹೌದಾ ಎಂದು ಶಾಕ್ ಆಗಬೇಡಿ? ಈ ವಿಷಯವನ್ನು ನೀವು ನಂಬಲೇ ಬೇಕು. ಮಂಗಳೂರಿನ ದೀಪ ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಮೋದಿ ಎಂದರೆ ಸಾಕು ಅವರ ಎಷ್ಟೋ ಗೊತ್ತಿರದ ವಿಷಯಗಳನ್ನು ದೀಪ ಅವರು ತುಂಬಾ ಸಲೀಸಾಗಿ ಹೇಳಿ ಬಿಡುತ್ತಾರೆ. ಮೋದಿ ಭಕ್ತೆ ಅನ್ನುವುದರಲ್ಲಿ ಅವರಿಗೆ ಯಾವುದೇ ಸಂಕೋಚವಿಲ್ಲಾ. ಮೋದಿಯ ಗುಣಗಾನ ಮಾಡುವ ದೀಪ ಶೆಣೈ ಅವರು ಮಂಗಳೂರಿನ ಕೊಡಿಯಾಲಬೈಲ್ ನಿವಾಸಿ.

ಕಳೆದ ಜನವರಿಯಲ್ಲಿ ಮೋದಿಗೆ ಉಡುಗೊರೆರೆಯಾಗಿ ಸಿಕ್ಕ ವಸ್ತುಗಳನ್ನ ಆಕ್ಷನ್ ಮೂಲಕ ಮಾರಾಟಕ್ಕೆ ಇಡಲಾಗಿತ್ತು. ಆನ್ ಲೈನ್ ಮೂಲಕ ಇದ್ದ ಈ ಮಾರಾಟದಲ್ಲಿ ಏನಾದರೂ ಒಂದು ವಸ್ತುವನ್ನ ಖರೀದಿಸಲೇ ಬೇಕು ಅನ್ನುವ ಹಠ ದೀಪ ಅವರದ್ದು, ಆ ಹಠವನ್ನು ಬಿಡದೆ ಸಾಕಷ್ಟು ವಸ್ತುಗಳಿಗೆ ಬಿಡ್ ಮಾಡಿದ್ದಾರೆ ಆದರೆ ಎಲ್ಲ ವಸ್ತುಗಳ ಬೆಲೆ ಹೆಚ್ಚ್ ಆಗುತ್ತಾ ಹೋಗಿದೆ. ಈ ಮಧ್ಯೆ ದೀಪ ಅವರ ಕಣ್ಣಿಗೆ ಮೋದಿ ಪೇಟ ಒಂದು ಕಂಡಿದೆ. ಅದನ್ನು ನೋಡಿದ್ದೇ ತಡ ಹೆಚ್ಚು ಯೋಚಿಸದೆ ಅದಕ್ಕೆ ಆನ್ ಲೈನ್ ಬಿಡ್ ಮಾಡಿದ್ದಾರೆ. ಬೇಸ್ ಪ್ರೈಸ್ ೮೦೦ ರೂಪಾಯಿ ಇದ್ದ ಈ ಪೇಟದ ಬೆಲೆ ೧೮೦೦ ( ೧೬೦೦ ಕ್ಕೆ ಪೇಟ , ೨೦೦ ರೂಪಾಯಿ ಕೊರಿಯರ್ ಚಾರ್ಜಸ್ ಮತ್ತು ೯೪ ರೂಪಾಯಿ ಇನ್ಶೂರೆನ್ಸ್ ಚಾರ್ಜಸ್ ) ರೂಪಾಯಿ ಆಗಿ ಅಲ್ಲಿಗೆ ಆನ್ ಲೈನ್ ಪ್ರಕ್ರಿಯೆ ಪೂರ್ಣ ಗೊಂಡು ಈ ಪೇಟ ದೀಪ ಶೆಣೈ ಅವರ ಹೆಸರಲ್ಲಿ ಬುಕ್ ಆಗಿದೆ.

ಈ ಪ್ರಕ್ರಿಯೆ ಎಲ್ಲ ಪೂರ್ಣ ಗೊಂಡು ಮಂಗಳೂರಿನ ದೀಪ ಶೆಣೈ ಅವರು ಕೆಲಸ ಮಾಡುವ ಸ್ಥಳಕ್ಕೆ ಈ ಪೇಟ ಬಂದು ತಲುಪಿದೆ. ಕೊರಿಯೆರ್ ಮೂಲಕ ಬಂದ ಈ ಪೇಟ ಸುಮಾರು ೮ ಮೀಟರ್ ಉದ್ದ ವಿದ್ದು ಆ ಪೇಟವನ್ನು ಬಿಚ್ಚಿ ಅದರಲ್ಲಿ ಮೂರು ಪೇಟವನ್ನು ಮಾಡಿ ಅವರ ಮಗಳಿಗೆ ಹಾಗೂ ಅವರು ಕೆಲಸ ಮಾಡುವ ಆಫೀಸಿನ ಮಾಲೀಕರ ಹೆಂಡತಿಗೆ ತಯಾರಿಸಿ ಕೊಟ್ಟಿದ್ದಾರೆ.

ಏಪ್ರಿಲ್ ೧೩ ರಂದು ಮೋದಿ ಮಂಗಳೂರಿಗೆ ಬಂದಾಗ ಇದೇ ಪೇಟ ಧರಿಸಿ ನಾವು ಕೇಂದ್ರ ಮೈದಾನಕ್ಕೆ ಹೋಗಿ ಅವರ ಭಾಷಣವನ್ನು ಕೇಳಿದೆವು ಎಂದು ದೀಪ ಅವರು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾವು ಪೇಟಕ್ಕೆ ಕೊಟ್ಟ ಹಣ ನಮಾಮಿ ಗಂಗೆ ಕಾರ್ಯಕ್ಕೆ ಮೋದಿ ದಾನ ಮಾಡಿದರಲ್ಲ ಅದೇ ನಮಗೆ ಖುಷಿ ಎಂದರು ದೀಪ ಶೆಣೈ.

Latest News