ಮಂಗಳೂರಿನಲ್ಲಿ ಚಿತ್ರೀಕರಣಗೊಂಡ ಮೋದಿ ಹಾಡು! ವೈರಲ್ ಆಯ್ತು ಮಂಗಳೂರು ಯುವಕರ ಸಾಂಗ್!
ಮಂಗಳೂರಿನಲ್ಲಿ ಚಿತ್ರೀಕರಣಗೊಂಡ ಮೋದಿ ಹಾಡು! ವೈರಲ್ ಆಯ್ತು ಮಂಗಳೂರು ಯುವಕರ ಸಾಂಗ್!
April 11: ಟೀಮ್ ನಮೋ ಮಂಗಳೂರು ತಂಡದಿಂದ ಚೌಕೀದಾರ್ ಶೇರ್ ಹೈ ಆಲ್ಬಮ್ ಬಿಡುಗಡೆ.
ಮಂಗಳೂರಿನ ಕೊಂಚಾಡಿ ಸೂರಜ್ ಗುರು ಕಾಮತ್ ಅವರು ಹಾಡಿರುವ ಚೌಕೀದಾರ ಶೇರ್ ಹೈ ಹಾಡು ಗುರುವಾರ ನಗರದ ಕೊಂಚಾಡಿಯಲ್ಲಿ ಬಿಡುಗಡೆಗೊಂಡಿತು.ಈಗಾಗಲೇ ಚೌಕೀದಾರ್ ಶೇರ್ ಹೈ ಸ್ಟಿಕ್ಕರ್ ವೈರಲ್ ಆಗಿದ್ದು ಈ ಚಿತ್ರ ಬಿಡಿಸಿದ ಕಲಾವಿದ ಜೀವನ ಆಚಾರ್ಯ ಮತ್ತು ಡಿ.ವಾಸುದೇವ ಕಾಮತ್ ಹಾಡನ್ನು ಬಿಡುಗಡೆಗೊಳಿಸಿದರು. ನರೇಂದ್ರ ಮೋದಿಯವರ ಸಾಧನೆ ತಿಳಿಸುವ ಹಾಡು ಇದಾಗಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಉದ್ದೇಶದಿಂದ ಮತ್ತು ನರೇಂದ್ರ ಮೇಲಿನ ಅಪಾರ ಪ್ರೀತಿಯಿಂದ ಈ ಹಾಡು ಮಾಡಿದ್ದೇವೆ ಅಂತ ಸೂರಜ್ ಕಾಮತ್ ತಿಳಿಸಿದರು.ಡಿ ವಾಸುದೇವ ಕಾಮತ್ ಮತ್ತು ಜಿ.ಅನಿಲ್ ಕಾಮತ್ ನಿರ್ಮಿಸಿದ್ದು, ಗೋಪಿ ಭಟ್ ಸಾಹಿತ್ಯ ಬರೆದಿದ್ದಾರೆ.ಸಂಗೀತ ಮೆಕ್ ಲೀನ್ ಡಿಸೋಜಾ, ಚಿತ್ರೀಕರಣ ಅನುಷ್ ಭಟ್, ವೀಡಿಯೋ ಸಂಕಲನ ದೀಕ್ಷಿತ್ ಸಾಲಿಯಾನ್ ಮಾಡಿದ್ದು ಮಂಗಳೂರಿನ ಮಾರ್ದೋಳ್, ಸಿದ್ಧಾರ್ಥ ಸ್ಟೂಡಿಯೋದಲ್ಲಿ ವೀಡಿಯೋ ನಿರ್ಮಿಸಲಾಯಿತು.ಮಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದ್ದು ಈ ಹಾಡು ಹಿಂದಿ ಭಾಷೆಯಲ್ಲಿರುವುದರಿಂದ ಮಹಾಲಸಾ ನಾರಾಯಣಿ ದೇವಿಯ ಅನುಗ್ರಹ ಮತ್ತು ಶ್ರೀಹರಿಗುರು ಕ್ರಪೆಯಿಂದ ದೇಶದೆಲ್ಲೆಡೆ ನರೇಂದ್ರ ಮೋದಿ ಅಭಿಮಾನಿಗಳಿಗೆ ಹೊಸ ಹುರುಪು ನೀಡಲಿದೆ ಎಂದು ಸೂರಜ್ ಕಾಮತ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.ಈ ಸಂಧರ್ಭದಲ್ಲಿ ಕೊಂಚಾಡಿ ಪರಿಸರದ ಹಿರಿಯರು, ಕೊಂಚಾಡಿ ಯುವಕರ ತಂಡ, ದೇವಸ್ಥಾನದ ಸ್ವಯಂ ಸೇವಕರು ಮತ್ತು ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.
https://m.facebook.com/story.php?story_fbid=2174481749311619&id=100002494467252