ಮಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಪಾಸ್ ಎಲ್ಲಿ ಸಿಗುತ್ತೆ? ಗೊತ್ತಾಗಲು ಈ ಸ್ಟೋರಿ ಓದಿ!

ಮಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಪಾಸ್ ಎಲ್ಲಿ ಸಿಗುತ್ತೆ? ಗೊತ್ತಾಗಲು ಈ ಸ್ಟೋರಿ ಓದಿ!

April 11: ಮೋದಿ ಮಂಗಳೂರಿಗೆ ಬರುತ್ತಿದ್ದಾರೆ ಎಂದು ಗೊತ್ತಾಗಿದ್ದೇ ತಡ ಅದೆಷ್ಟೋ ಮಂದಿಯಲ್ಲಿ ಒಂದೇ ಪ್ರಶ್ನೆ ‘ ಪಾಸ್ ಎಲ್ಲಿ ಸಿಗುತ್ತೆ ಎಂದು’ ನಿಮ್ಮಲ್ಲಿಯೂ ಅದೆಷ್ಟೋ ಮೋದಿ ಅಭಿಮಾನಿಗಳು ಕೇಳಿರ ಬಹುದು ನಿಮ್ಮಲ್ಲೂ ಉತ್ತರ ಸಿಗದೇ ನೀವು ಕೂಡ ಇನ್ನೊಬ್ಬರನ್ನು ಕೇಳಿರಬಹುದು!
ಹೌದು ಮಂಗಳೂರು, ಉಡುಪಿ, ಕಾಸರಗೋಡು ಹಾಗು ಇನ್ನಷ್ಟು ಅಕ್ಕಪಕ್ಕದ ಊರಿನವರಲ್ಲಿ ಇದೊಂದೇ ಪ್ರಶ್ನೆ. ಪ್ರಶ್ನೆಗೆ ಉತ್ತರ ಸಿಗದೇ ಅದೆಷ್ಟೋ ಮಂದಿ ಏನು ಮಾಡುವುದು ಎಂದು ತಲೆ ಕೆಡಿಸಿಕೊಂಡರೆ ಇನ್ನು ಕೆಲವರು ಬಿಜೆಪಿಯ ಕಚೇರಿಗೆ ಕರೆ ಮಾಡಿ ಪಾಸ್ ಸಿಗುತ್ತಾ ಅಂತ ಕೇಳುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಇನ್ನು ಮೋದಿ ಬರಲು ಕೆಲವೇ ಘಂಟೆಗಳು ಬಾಕಿ ಉಳಿದಿದೆ ಪಾಸ್ ಪಾಸ್ ಎಂದು ತಲೆ ಕೆಡಿಸಿಕೊಳ್ಳದೆ ನೇರವಾಗಿ ಏಪ್ರಿಲ್ ೧೩ಕ್ಕೆ ಮೂರು ಘಂಟೆಗೆ ಸರಿಯಾಗಿ ಕೇಂದ್ರ ಮೈದಾನಕ್ಕೆ ಬನ್ನಿ ಎನ್ನುತ್ತಿದ್ದಾರೆ ಬಿಜೆಪಿಯ ಕೆಲವು ನಾಯಕರು.
ಪಾಸ್ ನಮಗೆ ಬೇಕಾಗಿಲ್ಲ ಮೋದಿ ಕಾರ್ಯಕ್ರಮವನ್ನು ಎಷ್ಟೇ ದೂರದಿಂದ ನೋಡಿದರು ನಮಗೆ ಸಂತೋಷ ಎಂದು ಅಭಿಮಾನಿಗಳ ಮಾತು ಮೋದಿಯ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದೆ. ಅಂತೂ ಇಂತೂ ಮೋದಿ ಕಾರ್ಯಕ್ರಮಕ್ಕೆ ಬಿಜೆಪಿಯ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನೀರಿಕ್ಷೆ ಇದೆ.

Latest News