ಮಂಗಳೂರಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ – ಶಾಸಕ ಕಾಮತ್

ಮಂಗಳೂರಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ – ಶಾಸಕ ಕಾಮತ್

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 41 ಸೆಂಟ್ರಲ್ ವಾರ್ಡಿನಲ್ಲಿ 7 ಲಕ್ಷ ರೂಪಾಯಿ ವೆಚ್ಚದ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿನ ಶಾಸಕರು, ಸೆಂಟ್ರಲ್ ವಾರ್ಡಿನ ಮಹಮ್ಮಾಯಿ ದೇವಸ್ಥಾನ ರಕ್ತೇಶ್ವರಿ ಗುಡಿ ಹಿಂಬಾಗದ ಚರಂಡಿ ಅಭಿವೃದ್ಧಿಯ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರ ಬಹುದಿನದ ಬೇಡಿಕೆಯು ಈ ಮೂಲಕ ಈಡೇರಿಸಿದಂತಾಗಿದೆ ಎಂದಿದ್ದಾರೆ.
ಮಂಗಳೂರು ಅಭಿವೃದ್ಧಿಯ ಕಡೆ ಸಾಗುತ್ತಿದೆ. ಕೇಂದ್ರ ಸರಕಾರದ ಕನಸಿನ ಕೂಸಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೆಂಟ್ರಲ್ ವಾರ್ಡ್ ಒಳಗೊಂಡಿದೆ. ಇಲ್ಲಿ ಒಳ ಚರಂಡಿ, ಕುಡಿಯುವ ನೀರಿನ ಅಭಿವೃದ್ಧಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡಿದ್ದೇವೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಶಾಸಕರ ಅನುದಾನದಿಂದ ನಿರ್ಮಿಸಲ್ಪಡುವ 41 ನೇ ಸೆಂಟ್ರಲ್ ಮಾರ್ಕೆಟ್ ವಾರ್ಡಿನ ವಿ ಟಿ ರಸ್ತೆಯಲ್ಲಿ, ಮಹಾಮಾಯಾ ದೇವಸ್ಥಾನದ ಹಿಂದುಗಡೆ ರಕ್ತೇಶ್ವರಿ ಗುಡಿ ಪಕ್ಕದಲ್ಲಿರುವ ಬೃಹತ್ ಚರಂಡಿಯ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಶ್ರೀ ಡಿ ವೇದವ್ಯಾಸ್ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮಾ, ಕಾರ್ಪೊರೇಟರ್ ದಿವಾಕರ್, ವಾರ್ಡ್ ಅಧ್ಯಕ್ಷ ಮುರಳೀಧರ್ ನಾಯಕ್, ಉತ್ತರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ವಸಂತ್ ಜೆ ಪೂಜಾರಿ, ಮಹಿಳಾ ಮೋರ್ಚಾದ ಪ್ರಮುಖರಾದ ಪೂರ್ಣಿಮಾ ರಾವ್, ಬಿಜೆಪಿ ಮುಖಂಡರಾದ ಸೂರಜ್ , ಗೋಪಿ ಭಟ್, ಸೌಮ್ಯ ರೈ ಉಪಸ್ಥಿತರಿದ್ದರು

Read next

Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read