ಮಕ್ಕಳ‌ ಪಲಿತಾಂಶದಲ್ಲೂ ರಾಜಕೀಯ ಕೈಚಳಕವೇ?

ಮಕ್ಕಳ‌ ಪಲಿತಾಂಶದಲ್ಲೂ ರಾಜಕೀಯ ಕೈಚಳಕವೇ?

April 30: ಇತ್ತೀಚೆಗೆ ಪಿಯುಸಿ ಪಲಿತಾಂಶದಲ್ಲಿ ಎಂದಿನಂತೆ ಉಡುಪಿ,ದ.ಕ ಜಿಲ್ಲೆಗಳು ಪ್ರಥಮ ಮತ್ತು ದ್ವಿತೀಯ ಸ್ಥಾನಗಳ ಮೇಲಿನ ಪಟ್ಟು ಬಿಗಿಗೊಳಿಸಿತ್ತು.ಕಳೆದ ಅನೇಕ ವರ್ಷಗಳಿಂದ ಉಭಯ ಜಿಲ್ಲೆಗಳು ವಿದ್ಯಾಭ್ಯಾಸದಲ್ಲಿ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡಿರುವ ವಿಚಾರ ಕರ್ನಾಟಕಕ್ಕೆ ಮಾದರಿಯಾಗಿತ್ತು.ಆದರೆ ಪಿಯುಸಿ ಫಲಿತಾಂಶದಲ್ಲಿ ಇಪ್ಪತ್ತೈದರ ಕೆಳಗೆ ತಳ್ಳಲ್ಪಟ್ಟಿದ್ದ ಜಿಲ್ಲೆಗಳು ಇಂದು ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಕಸಿದುಕೊಂಡುರುವುದರ ಹಿಂದೆ ರಾಜಕೀಯ ಕೈ ಚಳಕ ಮೇಳೈಸಿದೆಯೇ ಎನ್ನುವ ಪ್ರಶ್ನೆ ಕರಾವಳಿ ಭಾಗದ ಜನರಲ್ಲಿ ಮೂಡಿದೆ.ರಾಜ್ಯದ ಮುಖ್ಯಮಂತ್ರಿಗಳ ಪ್ರತಿಷ್ಟೆಯ ಪ್ರಶ್ನೆಯಾಗಿದ್ದ ತವರು ಜಿಲ್ಲೆಯನ್ನು ಒಂದಂಕಿಗೇರಿಸುವ ಮೂಲಕ ವಿಧ್ಯಾರ್ಥಿಗಳ ಪಲಿತಾಂಶದಲ್ಲೂ ರಾಜಕೀಯ ತಂದಿಟ್ಟರೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.

Latest News