ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತ್ಯ – ಶಾಸಕ ಕಾಮತ್
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತ್ಯ – ಶಾಸಕ ಕಾಮತ್
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೆಂಟ್ರಲ್ ವಾರ್ಡಿನ ಭವಂತಿ ಸ್ಟ್ರೀಟ್ ವೆಂಕಟರಮಣ ಆರ್ಕೇಡ್ ಹಿಂಬದಿಯ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಬೃಹತ್ ಚರಂಡಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಪಾಲಿಕೆ ವ್ಯಾಪ್ತಿಯ ಸೆಂಟ್ರಲ್ ವಾರ್ಡಿನ ನಾಗರಿಕರ ಹಾಗೂ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮ ಅವರು ಈ ಕಾಮಗಾರಿ ನಡೆಸಿಕೊಡುವಂತೆ ಕೆಲ ತಿಂಗಳ ಹಿಂದೆ ನನ್ನಲ್ಲಿ ಕೇಳಿಕೊಂಡಿದ್ದರು. ಹಾಗಾಗಿ ರಾಘವೇಂದ್ರ ಸ್ವಾಮಿ ಮಠದ ಬಳಿಯಿರುವ ಲೀವಿಂಗ್ ಟವರ್ಸ್ ಬಳಿ ಸದ್ಯ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಚರಂಡಿ ರಚನೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೇವೆ.
ನಗರದಲ್ಲಿ ಅತ್ಯಂತ ಕಠಿಣ ಸಮಸ್ಯೆಗಳೆಂದರೆ ಕುಡಿ ನೀರು ಮತ್ತು ಡ್ರೈನೇಜ್ ಸಮಸ್ಯೆ. ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ವ್ಯವಸ್ಥಿತವಾದ ಚರಂಡಿಗಳನ್ನು ನಿರ್ಮಿಸದೆ ಹೋದರೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಅಗತ್ಯವಿರುವಲ್ಲಿ ಚರಂಡಿಗಳ ನಿರ್ಮಾಣ ಹಾಗೂ ಪ್ರಸ್ತುತ ಇರುವ ಚರಂಡಿಯಲ್ಲಿ ವ್ಯವಸ್ಥಿತವಾಗಿ ನೀರು ಹರಿದು ಹೋಗಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತೇನೆ ಎಂದಿದ್ದಾರೆ.
ಈ ಕಾಮಗಾರಿ ನಡೆಯುವ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಒಂದಷ್ಟು ಸಮಸ್ಯೆಗಳಾಗಬಹುದು. ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರ ಸಹಕಾರ ಬೇಕಾಗಿದೆ ಎಂದು ಶಾಸಕ ಕಾಮತ್ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯೆ ಶ್ರೀಮತಿ ಪೂರ್ಣಿಮಾ, ಕಾರ್ಪೊರೇಟರ್ ದಿವಾಕರ್,ವಾರ್ಡ್ ಅಧ್ಯಕ್ಷ ಮುರಳೀಧರ್ ನಾಯಕ್, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ರಮೇಶ್ ಹೆಗ್ಡೆ, ಪೂರ್ಣಿಮಾ ರಾವ್, ಗೋಪಿ ಭಟ್, ಸೂರಜ್, ಸೌಮ್ಯ ರೈ,ಸಾಮಾಜಿಕ ಕಾರ್ಯಕರ್ತರಾದಹನುಮಂತ ಕಾಮತ್,ಸ್ಥಳೀಯರಾದ ಡಾ ಅಶೋಕ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.