ಮೋದಿ ಎರಡೆನೆಯ ಬಾರಿ ಪ್ರಧಾನಿಯಾಗಿದಕ್ಕೆ ಉಡುಪಿಯಿಂದ ತಿರುಪತಿಗೆ ಪಾದಯಾತ್ರೆ!

ಮೋದಿ ಎರಡೆನೆಯ ಬಾರಿ ಪ್ರಧಾನಿಯಾಗಿದಕ್ಕೆ ಉಡುಪಿಯಿಂದ ತಿರುಪತಿಗೆ ಪಾದಯಾತ್ರೆ!

June 22: ನರೇಂದ್ರ ಮೋದಿ ಪ್ರಧಾನಿಯಾಗಿದಕ್ಕೆ ಮಂಗಳೂರಿನ ಮೋದಿ ಅಭಿಮಾನಿಗಳು ಕಟೀಲು ಮೇಳದ ಯಕ್ಷಗಾನ ನಡೆಸಿದ್ದು ಈಗ ಹಳೆಯ ವಿಷಯ. ಮೋದಿಗಾಗಿ ಏನೆಲ್ಲಾ ಮಾಡುತ್ತಾರೆ ಅನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ತಿರುಪತಿ ಹೋಗುತ್ತೇನೆ ಎಂದಿದ್ದ ಹರಿಖಂಡಿಗೆಯ ಈ ವ್ಯಕ್ತಿ ಇದೀಗ ಅವರ ಗೆಳೆಯನೊಂದಿಗೆ ನಡೆದುಕೊಂಡೇ ಹಾಸನ ತಲುಪಿದ್ದಾರೆ. ಸುಮಾರು ೨೦ ದಿನದ ಈ ನಡಿಗೆ ಈಗ ಹಾಸನ ತಲುಪಿದೆ. ಹರಿಖಂಡಿಗೆಯಿಂದ ಶುರುವಾದ ಈ ನಡಿಗೆ ತಿರುಪತಿಯ ದೇವಸ್ಥಾನ ತಲುಪಲು ಇನ್ನು ಹಲವು ದಿನಗಳು ಬೇಕು. ನಮೋ ಹರಿಖಂಡಿಗೆ ಎಂದೇ ಫೇಸ್ಬುಕ್ ಮಂದಿಗೆ ಪರಿಚಿತರಾಗಿರುವ ಇವರು ನಡಿಗೆಯ ಚಿತ್ರಗಳನ್ನು ಹಾಗೂ ಇವರು ಎಲ್ಲಿ ತಲುಪಿದ್ದಾರೆ ಅನ್ನುವ ವಿಚಾರವನ್ನು ಫಾಸಬುಕ್ನಲ್ಲೇ ಶೇರ್ ಮಾಡುತ್ತಿದ್ದಾರೆ. ಮಳೆ, ಬಿಸಿಲು, ಗಾಳಿ ಏನೇ ಬರಲಿ ನಾವು ದಿನಕ್ಕೆ ೩೦ ಕಿಲೋಮೀಟರ್ ನಡೆಯುತ್ತೇವೆ ಅನ್ನುವ ಇವರ ಧೈರ್ಯ ನಿಜಕ್ಕೂ ಮೆಚ್ಚಲೇ ಬೇಕು. ಇವರ ನಡಿಗೆ ಸುಖಕರವಾಗಿರಲಿ ಎಂದು ನಾವು ಕೂಡ ಆಶಿಸುತ್ತೇವೆ.

Latest News