ಯೂತ್ ಆಫ್ ಜಿಎಸ್ ಬಿ ಮುಂಬೈ ಚಾಪ್ಟರ್ ಉದ್ಘಾಟನೆ

ಯೂತ್ ಆಫ್ ಜಿಎಸ್ ಬಿ ಮುಂಬೈ ಚಾಪ್ಟರ್ ಉದ್ಘಾಟನೆ

ವಿವಿಧ ಕ್ಷೇತ್ರಗಳ ಸಾಧಕ, ಪ್ರತಿಭಾವಂತ ಯುವಕ, ಯುವತಿಯರಿಗೆ ವೇದಿಕೆ ಕಲ್ಪಿಸಿ ಜನಮನ್ನಣೆ ಗಳಿಸಿರುವ ಯೂತ್ ಆಫ್ ಜಿಎಸ್ ಬಿ ಇದರ ಮುಂಬೈ ಚಾಪ್ಟರ್ ಉದ್ಘಾಟನೆ ಭಾನುವಾರ ನಡೆಯಿತು.

ಮುಂಬೈಯ ಭೂಕೈಲಾಸ್ ನಗರದಲ್ಲಿರುವ ಶ್ರೀ ಗುರುಗಣೇಶ್ ಪ್ರಸಾದ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಮುಂಬೈ ಚಾಪ್ಟರ್ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಂಬೈ ಚಾಪ್ಟರ್ ಇದರ ಪ್ರಮುಖರಾಗಿರುವ ಸಂದೇಶ್ ಕಾಮತ್, ಮುಂಬೈ ನಗರದಲ್ಲಿರುವ ಸಂಗೀತಾಸಕ್ತರಿಗೆ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಪುತ್ತೂರು ನರಸಿಂಹ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಮುಂಬೈ ಚಾಪ್ಟರ್ ತನ್ನ ಸಾಮಾಜಿಕ ಸೇವಾತತ್ಪರತೆಯನ್ನು ಪ್ರಾರಂಭಿಸಿದೆ. ಮುಂಬೈಯಲ್ಲಿ ನೆಲೆಸಿರುವ ನಮ್ಮ ಸಮುದಾಯದ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಯುವಜನಾಂಗ ಸಹಕಾರದೊಂದಿಗೆ ಇನ್ನಷ್ಟು ಕೆಲಸಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಇನ್ನೊರ್ವ ಪ್ರಮುಖರಾಗಿರುವ ಪ್ರಥಮೇಶ್ ಭಟ್ ಅವರು ಯೂತ್ ಆಫ್ ಜಿಎಸ್ ಬಿ ಮಂಗಳೂರಿನಲ್ಲಿ ಪ್ರಾರಂಭವಾದ ಆರೇಳು ತಿಂಗಳೊಳಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿ ಯುವಸಮುದಾಯದಲ್ಲಿ ಖ್ಯಾತಗೊಂಡಿದೆ. ಮುಂಬೈಯಲ್ಲಿ ಅಂತಹುದೇ ಕಾರ್ಯಗಳನ್ನು ಮಾಡುವ ಮೂಲಕ ಜಿಎಸ್ ಬಿ ಸಮುದಾಯದ ಯುವಕ, ಯುವತಿಯರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪ್ರಜ್ವಲ್ ಕಾಮತ್ ಮಾತನಾಡಿ, ತಮ್ಮ ಪ್ರಯತ್ನಕ್ಕೆ ನೆರವು ನೀಡಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು. ಸಂಜೆ ಪುತ್ತೂರು ನರಸಿಂಹ ನಾಯಕ್ ಅವರಿಂದ ಭಜನಾಸಂಧ್ಯಾ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಮಲ್ಯ, ಪದ್ಮನಾಭ ಪೈ, ಸುರೇಶ್ ಪೈ, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಸಹಿತ ಮುಂಬೈಯ ನೂರಾರು ಜನ ಭಾಗವಹಿಸಿದ್ದರು.

Latest News
also read