ಶ್ರೀ ಬಿಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವರನ್ನಾಗಿ ಮಾಡಲಿ:- ಅನ್ವಿತ್ ಕಟೀಲ್

ಶ್ರೀ ಬಿಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವರನ್ನಾಗಿ ಮಾಡಲಿ:- ಅನ್ವಿತ್ ಕಟೀಲ್

ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆಗಿಂತಲೂ ದೊಡ್ಡ ಮಟ್ಟದ ಜನಾದೇಶ ಲಭಿಸಿದ್ದು ನನ್ನನ್ನು ಸೇರಿ ಕಾಂಗ್ರೆಸ್ ಪಕ್ಷದ ಕೋಟ್ಯಾಂತರ ಕಾರ್ಯಕರ್ತರಿಗೆ ದೊಡ್ಡ ಮಟ್ಟದ ಸಂತಸ, ಸಮಾಧಾನ ತಂದಿದೆ ನಾವು ಈ ದೊಡ್ಡ ಬಹುಮತದ ಆಧಾರದಲ್ಲಿ ಜನ ಉಪಯೋಗಿ, ಗಟ್ಟಿಯಾದ ಸುಭದ್ರವಾದ ಸರಕಾರವನ್ನು ನೀಡಲಿದ್ದೇವೆ ಎಂಬ ವಿಶ್ವಾಸ ನನಗಿದೆ.

ಈ ಸಂದರ್ಭದಲ್ಲಿ ನಮ್ಮ ಪಕ್ಷಕ್ಕೆ ನಮ್ಮ ಸೋಲಿನ ಹಾಗೂ ಸಂಘರ್ಷದ ದಿನಗಳಲ್ಲಿ ಬೆನ್ನುಕೊಟ್ಟು ಬೆಂಬಲವಾಗಿ ನಿಂತ ನೂರಾರು ನಾಯಕರಿಗೆ ಈ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡಬೇಕು ಎಂಬುದು ನನ್ನ ಅಭಿಪ್ರಾಯ ಅಂತಹವರ ಸಾಲಿನಲ್ಲಿ ಮೊದಲನೆಯದಾಗಿ ನಿಲ್ಲುವವರು ನಮ್ಮ ಹೆಮ್ಮೆಯ ಶ್ರೀ ಬಿಕೆ ಹರಿಪ್ರಸಾದ್ ಅವರು ಕಳೆದ 40 ವರ್ಷಗಳಿಂದ ಪಕ್ಷದ ಕೆಲಸಗಳನ್ನು ಶ್ರವಣಕುಮಾರನಂತೆ ನಿರ್ವಸಿಕೊಂಡು ಉನ್ನತ ನಾಯಕರು ಹೇಳಿದ ಕೆಲಸಗಳನ್ನು ಶಿರಸಾ ವಹಿಸಿ ಮಾಡಿರುವ ಹರಿಪ್ರಸಾದ್ ರಿಗೆ ಗೃಹ ಸಚಿವ ಸ್ಥಾನ ಸಿಗಲೇಬೇಕೆಂಬುದು ನನ್ನ ಅಭಿಪ್ರಾಯ ಮತ್ತು ಅಗ್ರಹ. ಕೋಮುವಾದಿ ಶಕ್ತಿಗಳು ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಸದಾ ವಿರೋಧಿಸುವ ಬಿಕೆ ಹರಿಪ್ರಸಾದ್ ಅವರು ಗೃಹ ಸಚಿವರಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿರುತ್ತದೆ ಎಂಬುದು ನನ್ನ ಬಲವಾದ ನಂಬಿಕೆ ಮತ್ತು ವಿಶ್ವಾಸ.

Latest News