ಸಂಧಿ ಪಾಠ ಕಲಿಸಲು ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಹಾರಿರುವ ಶೆಟ್ರು

ಸಂಧಿ ಪಾಠ ಕಲಿಸಲು ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಹಾರಿರುವ ಶೆಟ್ರು

ಬಹುನಿರೀಕ್ಷಿತ ಸಿನಿಮಾ ‘ಸವರ್ಣ ದೀರ್ಘ ಸಂಧಿ’ ಬಿಡುಗಡೆಗೆ ಸಜ್ಜಾಗಿದೆ. ಹೊಸ ಕಲಾವಿದರು ನಟಿಸಿರುವ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ. ಕೋಸ್ಟಲ್ ವುಡ್‌ನಲ್ಲಿ ‘ಚಾಲಿ ಪೋಲಿಲು’ ಎಂಬ ತುಳು ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ವೀರೇಂದ್ರ ಶೆಟ್ಟಿ ‘ಸವರ್ಣ ದೀರ್ಘ ಸಂಧಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಆದರೆ ಈ ಬಾರಿ ಬರೀ ನಿರ್ದೇಕನಾಗಿ ಅಲ್ಲ, ನಾಯಕ ನಟನಾಗಿಯೂ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ತಮ್ಮ ಎರಡನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತುಳು ಸಿನಿಮಾದಿಂದ ಕನ್ನಡ ಸಿನಿಮಾಕ್ಕೆ ಬರುವುದು ಅಷ್ಟೊಂದು ಸುಲಭದ ವಿಷ್ಯವಲ್ಲ. ಹೀಗಿರುವಾಗ ಕೋಸ್ಟಲ್‌ವುಡ್‌ನಿಂದ ಬಂದು ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಲು ಭರ್ಜರಿ ತಯಾರಿ ನಡೆದಿದೆ ಅಂತಾನೇ ಹೇಳಬಹುದು. ಸವರ್ಣ ದೀರ್ಘ ಸಂಧಿಯು ಒಂದು ಗ್ಯಾಂಗ್‌ಸ್ಟಾರ್ ಸಿನಿಮಾವಾಗಿದ್ದರೂ ಸಿನಿರಸಿಕರಿಗೆ ಹಾಸ್ಯದ ರಸದೌತಣ ಸಿಗುವುದರಲ್ಲಿ ಡೌಟೇ ಇಲ್ಲ ಎನ್ನುತ್ತದೆ ಚಿತ್ರತಂಡ.
ಈ ಸಿನಿಮಾವನ್ನು ವೀರೂ ಟಾಕೀಸ್ ಹಾಗೂ ಲೈಲಾಕ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ ಅಡಿ ನಿರ್ದೇಶಿಸಲಾಗಿದೆ.
ಒಟ್ಟಾರೆ ಕೋಸ್ಟಲ್‌ವುಡ್‌ನಲ್ಲಿ ಚಿಂದಿ ಉಡಾಯಿಸಿರುವ ಈ ನಿರ್ದೇಶಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರ್ತಾರಾ ಅನ್ನೋದನ್ನು ಕಾದು ನೋಡಬೇಕು

Latest News