ಸಮುದ್ರ ತೀರದಲ್ಲಿ ಕಂಡು ಬರುವ ತೈಲ ತ್ಯಾಜ್ಯದ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಮನವಿ

ಸಮುದ್ರ ತೀರದಲ್ಲಿ ಕಂಡು ಬರುವ ತೈಲ ತ್ಯಾಜ್ಯದ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಮನವಿ

June 4: ಕಳೆದ ಒಂದೆರಡು ತಿಂಗಳಿನಿಂದ ಕರಾವಳಿ ಸಮುದ್ರ ತೀರದಲ್ಲಿ ಕಂಡುಬರುತ್ತಿರುವ ತೈಲ ತ್ಯಾಜ್ಯದ ಜಿಡ್ಡಿನ ಸಮಸ್ಯೆಯಿಂದ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ.ತೈಲ ಜಿಡ್ಡಿನಿಂದ ಡಾಲ್ಫಿನ್,ಆಮೆ ಮತ್ತು ಬೃಹತ್ ಗಾತ್ರದ ಮೀನುಗಳು ಸಾಯುತ್ತಿದ್ದು, ಕಳೆಬರಗಳು ತೇಲಿ ಸಮುದ್ರದ ದಡ ಸೇರುತ್ತಿದೆ.ತೈಲ ಜಿಡ್ಡಿನಿಂದಾಗಿ ಮೀನುಗಳು ಸಮುದ್ರ ತೀರಕ್ಕೆ ಬಾರದ ಕಾರಣದಿಂದಾಗಿ ಮಳೆಗಾಲದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೂ ಹೊಡೆತ ಬಿದ್ದಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಸದ್ಯ ಈಗಾಗಲೇ ಮತ್ಸ್ಯ ಕ್ಷಾಮದಿಂದ ಕಂಗಾಲಾಗಿರುವ ಮೀನುಗಾರ ಕುಟುಂಬಗಳು ಮಳೆಗಾಲದ ಸಂಧರ್ಭದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯನ್ನು ಅವಲಂಭಿಸಿದೆ. ಅವರ ಬದುಕಿನ ಪ್ರಶ್ನೆಯನ್ನು ಅರ್ಥ ಮಾಡಿಕೊಂಡು ರಾಜ್ಯ ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸರಕಾರವನ್ನು ಆಗ್ರಹಿಸಿದ್ದಾರೆ.

Latest News