ಸವರ್ಣದೀರ್ಘ ಸಂಧಿಯಲ್ಲಿ ಫೀನಿಕ್ಸ್‌ ನಂತೆ ಎದ್ದು ಬಂದ ಮನೋಮೂರ್ತಿ

ಸವರ್ಣದೀರ್ಘ ಸಂಧಿಯಲ್ಲಿ ಫೀನಿಕ್ಸ್‌ ನಂತೆ ಎದ್ದು ಬಂದ ಮನೋಮೂರ್ತಿ

ತಮ್ಮ ಸಂಗೀತದ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದ ಮನೋಮೂರ್ತಿ ಹಲವಾರು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದರು. ಮನೋಮೂರ್ತಿ ಮತ್ತೆ ಸಿನಿಮಾದತ್ತ ತಲೆ ಹಾಕುತ್ತಾರೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ ಅನ್ನಿಸುತ್ತೆ. ಹೀಗಿರುವಾಗ ಮನೋಮೂರ್ತಿ ಸವರ್ಣದೀರ್ಘ ಸಂಧಿ ಸಿನಿಮಾದ ಮೂಲಕ ಫೀನಿಕ್ಸ್‌ ನಂತೆ ಎದ್ದು ಬಂದು ಇಂತಹ ಮ್ಯಾಜಿಕ್‌ನ್ನು ಸೃಷ್ಠಿಸಿದ್ದಾರೆ.

ವೀರೇಂದ್ರ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸವರ್ಣದೀರ್ಘ ಸಂಧಿ ಸಿನಿಮಾಕ್ಕೆ ಅದ್ಭುತ ಸಂಗೀತವನ್ನು ನೀಡುವ ಮೂಲಕ ಮತ್ತೆ ತಮ್ಮ ಸಂಗೀತದ ಔತಣವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.


ಅದರಲ್ಲೂ ಶ್ರೇಯಾ ಘೋಷಾಲ್ ಹಾಡಿರುವ ಕೊಳಲಾದೆ ನಾ.. ಕೃಷ್ಣಾ… ಹಾಡಂತೂ ಚಿತ್ರ ರಸಿಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಯೂಟ್ಯೂಬ್‌ನಲ್ಲಂತೂ ಸಾಕಷ್ಟು ಹಿಟ್ಸ್ ಗಳಿಸಿದೆ. ಈ ಮೊದಲು ತುಳು ಸಿನಿಮಾವನ್ನು ನಿರ್ದೇಶಿಸಿದ್ದ ವೀರೇಂದ್ರ ಶೆಟ್ಟಿ ಅವರಿಗಿದು ಎರಡನೆಯ ಚಿತ್ರವಾಗಿದೆ.

Latest News