ಸುಳ್ಯ ಮೂಲಭೂತ ಸೌಕರ್ಯ ವಂಚಿತ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ !

ಸುಳ್ಯ ಮೂಲಭೂತ ಸೌಕರ್ಯ ವಂಚಿತ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ !

ಸುಳ್ಯ ಪರಿಸರದ ಕೆಲ ಭಾಗಗಳಲ್ಲಿ ಮೂಲಭೂತ ಸೌಕರ್ಯ ವಂಚಿತ 40 ಕುಟುಂಬಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಸುಳ್ಯದ ಕಾಜಿಮಡ್ಕ,ಕೊಪ್ಪಡ್ಕ,ಮೆಂಟೆಕಜೆ,ಅಂಜನಕಜೆ,ಗುಳಿಕಾನ ಈ ಗ್ರಾಮದಲ್ಲಿ ವಾಸ್ತವ್ಯಹೊಂದಿರುವ ಕುಟುಂಬಗಳು ಕಳೆದ ಕೆಲ‌ ವರ್ಷಗಳಿಂದ ಸಂಪರ್ಕ ಸೇತುವೆ,ರಸ್ತೆ ನಿರ್ಮಾಣ ಮುಂತಾದ ಅನೇಕ ಸೌಲಭ್ಯಗಳಿಗಾಗಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿದರೂ ಇಂದಿನ ವರೆಗೂ ಅದು ಫಲ ನೀಡಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳು,ಉಪ ವಿಭಾಗ ದಂಡಾಧಿಕಾರಿಗಳು ಮತ್ತು ತಹಶಿಲ್ದಾರರು ಲಿಖಿತ ಭರವಸೆ ನೀಡಿದರೆ ಮಾತ್ರ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ ಎಂದು ಗ್ರಾಮಸ್ಥರು ಬಸಾರಿದ್ದಾರೆ.ಹಾಗಾಗಿ ಮೂಲಭೂತ ಸೌಕರ್ಯ ಒದಗಿಸುವ ವರೆಗೂ ಮತದಾನ ಬಹಿಷ್ಕಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

Latest News