ರಾಷ್ಟ್ರೀಯ ಚಿಂತನೆಯುಳ್ಳ ದೇಶಭಕ್ತರನ್ನು ಹೊರತರುವ ಕೆಲಸ ಶಾಲೆಗಳಿಂದ ಆಗಲಿ- ಶಾಸಕ ಡಾ.ಭರತ್ ಶೆಟ್ಟಿ

ರಾಷ್ಟ್ರೀಯ ಚಿಂತನೆಯುಳ್ಳ ದೇಶಭಕ್ತರನ್ನು ಹೊರತರುವ ಕೆಲಸ ಶಾಲೆಗಳಿಂದ ಆಗಲಿ- ಶಾಸಕ ಡಾ.ಭರತ್ ಶೆಟ್ಟಿ

ರಾಷ್ಟ್ರೀಯ ಮೌಲ್ಯಗಳನ್ನು ಕಲಿಸಿ, ಮಕ್ಕಳಲ್ಲಿ ರಾಷ್ಟ್ರೀಯ ಪರ ಚಿಂತನೆ ಮೂಡಿಸುವ ಕಾರ್ಯ ಶಾಲೆಗಳಿಂದ ಆಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ವಿದ್ಯಾರ್ಥಿಗಳಲ್ಲಿ ಅಂತಹ ಶಿಕ್ಷಣ ಸಿಗುವ ಕೆಲಸ ಮಾಡಬೇಕು. ಶಾಲೆಗಳು ರಾಷ್ಟ್ರಭಕ್ತರನ್ನು ಸಮಾಜಕ್ಕೆ ನೀಡುವ ಕಾರ್ಯದಲ್ಲಿ ಶಿಕ್ಷಕರು, ಪೋಷಕರು, ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದರು.

ಅವರು ಮಂಗಳೂರು ತಾಲೂಕಿನ ಗುರುಕಂಬಳದಲ್ಲಿ ನಿರ್ಮಾಣವಾಗಲಿರುವ ಮೌಲಾನಾ ಆಝಾದ್ ಮಾದರಿ ಇಂಗ್ಲೀಷ್ ಮೀಡಿಯಂ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಬುಧವಾರ ನೆರವೇರಿಸಿ ಮಾತನಾಡುತ್ತಿದ್ದರು. ಈ ಶಾಲೆ 2.35 ಕೋಟಿ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಅಮಿತಾ ಶೆಟ್ಟಿ ಪೆರಾರ ಹಾಗೂ ಪಂಚಾಯತ್ ಸದಸ್ಯರು, ಗ್ರಾಮದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

Latest News