ಸ್ಕೌಟ್ -ಗೈಡ್ ಮೇಳ ” ಕಸದಿಂದ ರಸ ” ವಿಭಾಗದಲ್ಲಿ ಕೆನರಾ ಶಾಲೆಯ ಕೆ . ಆದಿತ್ಯ ಶೆಣೈ ಪ್ರಥಮ ಸ್ಥಾನ
ಸ್ಕೌಟ್ -ಗೈಡ್ ಮೇಳ ” ಕಸದಿಂದ ರಸ ” ವಿಭಾಗದಲ್ಲಿ ಕೆನರಾ ಶಾಲೆಯ ಕೆ . ಆದಿತ್ಯ ಶೆಣೈ ಪ್ರಥಮ ಸ್ಥಾನ
ಮಂಗಳೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ಆಶ್ರಯದಲ್ಲಿ ಮಂಗಳೂರು ನಗರ ಸ್ಥಳೀಯ ಸಂಸ್ಥೆ , ನೆಹರೂ ಅವೆನ್ಯೂ ರಸ್ತೆ , ಲಾಲ್ ಬಾಗ್ , ಮಂಗಳೂರು ಇದರ ಕಬ್ – ಬುಲ್ ಬುಲ್ ಉತ್ಸವ , ಸ್ಕೌಟ್ -ಗೈಡ್ ಮೇಳ , ರೋವರ್ -ರೇಂಜರ್ ಸಮಾಗಮ ಶನಿವಾರ ನಗರದ ಭಾರತ್ ಸ್ಕೌಟ್ ಗೈಡ್ಸ್ ಭವನದಲ್ಲಿ ಜರಗಿತು .
ಸ್ಕೌಟ್ -ಗೈಡ್ ಮೇಳ ದಲ್ಲಿ ” ಕಸದಿಂದ ರಸ ” ವಿಭಾಗದಲ್ಲಿ ಕೆನರಾ ಹೈಯರ್ ಪ್ರೈಮರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಕೆ . ಆದಿತ್ಯ ಶೆಣೈ ಮತ್ತು ಕೆ . ಶಮಂತ್ ಶರ್ಮ ಪ್ರಥಮ ಸ್ಥಾನ ಪಡೆದಿರುತ್ತಾರೆ .
ಆದಿತ್ಯ ಶೆಣೈ
ಬೆಳಗಿನಿಂದ ಕಾರ್ಯಕ್ರಮ ನಡೆದು ನಗರದ ಸುಮಾರು ಐದು ಶಾಲೆಯ ೧೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು . ಬಳಿಕ ಸಾಯಂಕಾಲ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು . ವೇದಿಕೆಯಲ್ಲಿ ಸ್ಕೌಟ್ ಗೈಡ್ ನ ಜಿಲ್ಲಾ ಅಧಿಕಾರಿ ಶ್ರೀ ಭರತ್ರಾಜ್ , ಕುಮಾರಿ ದೇವಕಿ , ಅತಿಥಿಗಳಾಗಿ ರಾಷ್ಟ್ರಪತಿ ಪುರಸ್ಕಾರ ವಿಜೇತ ಶ್ರೀ ಶ್ರೀನಿವಾಸ್ ಕಿಣಿ , ಶ್ರೀಮತಿ ಹೆಲೆನಾ ಲೋಬೊ , ಶ್ರೀ ಪ್ರತಿಮ್ ಕುಮಾರ್ , ಕೆನರಾ ಶಾಲೆಯ ಪ್ರಾಧ್ಯಾಪಕಿಯರಾದ ಶ್ರೀಮತಿ ಪೂರ್ಣಿಮಾ , ಶ್ರೀಮತಿ ಲಕ್ಷ್ಮಿ ವೈ , ಶ್ರೀಮತಿ ರೂಪಾ , ಶ್ರೀಮತಿ ಆಶಾ ಕಾಮತ್ ಉಪಸ್ಥಿತರಿದ್ದರು .
