ಕಾಂಗ್ರೇಸ್ ನಾಯಕತ್ವ ಸರಿಯಿಲ್ಲದೇ ಇರುವಾಗ ಅವರ ಪಕ್ಷ ಹೇಗೆ ಸತ್ಯದ ಹಾದಿಯಲ್ಲಿ ನಡೆಯುತ್ತದೆ – ಶಾಸಕ ಕಾಮತ್

ಕಾಂಗ್ರೇಸ್ ನಾಯಕತ್ವ ಸರಿಯಿಲ್ಲದೇ ಇರುವಾಗ ಅವರ ಪಕ್ಷ ಹೇಗೆ ಸತ್ಯದ ಹಾದಿಯಲ್ಲಿ ನಡೆಯುತ್ತದೆ – ಶಾಸಕ ಕಾಮತ್

April 4: ಕಾಂಗ್ರೇಸ್ ಯುವರಾಜ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಗೂ ಸರಿ ತೂಗಲಾರರು,ಆದರೂ ಕಾಂಗ್ರೇಸಿಗರು ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಹರ ಸಾಹಸ ಪಡುತ್ತಿದ್ದಾರೆಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ವ್ಯಂಗ್ಯವಾಡಿದ್ದಾರೆ.

ಸಂಸತ್ತಿನಲ್ಲಿ ಪಾಲ್ಗೊಳ್ಳುವುದು ಅಥವ ಅಲ್ಲಿನ ಪ್ರಶ್ನೋತ್ತರದ ಅಂಕಿ ಅಂಶಗಳನ್ನು ಕುರಿತು ಮಾತನಾಡಿದ‌ ಶಾಸಕರು ಪ್ರಮುಖ ಪತ್ರಿಕೆಯೊಂದು ನಡೆಸಿದ‌ ಸಮೀಕ್ಷೆಯ ವರದಿಯಂತೆ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದಲ್ಲಿ ನಂ 1 ಸಂಸದರಾಗಿ ಹೊರ ಹೊಮ್ಮಿದರೆ ದೇಶದಲ್ಲಿ 6 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.ಅದೇ ರೀತಿ ರಾಹುಲ್ ಗಾಂಧಿ 350 ನೇ ಸ್ಥಾನದಲ್ಲಿದ್ದಾರೆ ಎಂದರು.ವೈಯಕ್ತಿಕ ಸಾಧನೆಯಲ್ಲೂ ಕೂಡ ಸಂಸತ್ ಹಾಜರಾತಿಯಲ್ಲಿ ನಳಿನ್ ಕುಮಾರ್ ಕಟೀಲ್ ಶೇಖಡ 92 ಆದರೆ ರಾಹುಲ್ ಗಾಂಧಿ ಶೇಖಡ 52ರಷ್ಟು ಸಂಸತ್ ಹಾಜರಾತಿಯಲ್ಲಿ ಹಿಂದಿದ್ದಾರೆ ಎಂದರು.

Latest News
also read