ದೇಲಂತಬೆಟ್ಟು ಕೈಯೂರಿನಲ್ಲಿರುವ ಅಸಾಹಾಯಕ ವೃದ್ಧೆ ಲಕ್ಷ್ಮಿ ಪೂಜಾರಿಯವರ ಮನೆಗೆ ಭೇಟಿ ಕೊಟ್ಟ ಕಸ್ತೂರಿ ಪಂಜ

ದೇಲಂತಬೆಟ್ಟು ಕೈಯೂರಿನಲ್ಲಿರುವ ಅಸಾಹಾಯಕ ವೃದ್ಧೆ ಲಕ್ಷ್ಮಿ ಪೂಜಾರಿಯವರ ಮನೆಗೆ ಭೇಟಿ ಕೊಟ್ಟ ಕಸ್ತೂರಿ ಪಂಜ

ಮಾನಸಿಕ ಖಿನ್ನತೆ ಇಂದ ಬಳಲುತ್ತಿರುವ ಓರ್ವ ಮಹಿಳೆಯ ಜೊತೆ ಅಸಾಹಾಯಕ ವೃದ್ಧೆಯ ಪರಿಸ್ಥಿತಿ, ಕಾರ್ಯಕರ್ತರಿಂದ ತಿಳಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ದೇಲಂತಬೆಟ್ಟು ಕೈಯೂರಿನ ಮನೆಗೆ ಭೇಟಿ ಕೊಟ್ಟು ವೃದ್ಧೆಯ ಪರಿಸ್ಥಿತಿ ಕಂಡು ಮರುಕ ಪಟ್ಟರು.ಕೈಯೂರಿನ ದುರ್ಗಮ ಹಾದಿಯಲ್ಲಿ ಕಾಡು ಪೊದೆಗಳ ಮದ್ಯೆ ಸರಿಯಾದ ಸೂರಿಲ್ಲದೆ, ಹಸಿವೆ ನೀಗಿಸಲು ಸರಿಯಾದ ಆಹಾರ ಸಿಗದೆ ಪಡಭಾರದ ಕಷ್ಟ ಪಡುತ್ತಿರುವ ಮಹಿಳೆ ಮತ್ತು ವೃದ್ಧೆಗೆ ಆರೋಗ್ಯ ಚಿಕಿತ್ಸೆ ಮತ್ತು ಅವರ ಮುಂದಿನ ಜೀವನೋಪಾಯಕ್ಕೆ ಬೇಕಾದ ಅವಶ್ಯಕ ನೆರವಿಗೆ ನಾಳೆಯೇ ಕಾರ್ಯೋನ್ಮುಕರಾಗುವ ಭರವಸೆ ನೀಡಿದರು.

ನಾಗರಪಂಚಮಿ ದಿನವಾಗಿದ್ದರು,ಬಿಡುವು ಮಾಡಿಕೊಂಡು, ಕರೆಗೆ ಓಗೊಟ್ಟು ವೃದ್ಧ ಮಹಿಳೆಯ ಸಹಾಯಕ್ಕೆ ಆಗಮಿಸಿದ ಜನಪ್ರತಿನಿಧಿ ಕಸ್ತೂರಿ ಪಂಜ.

Latest News
also read