ಸಿಕ್ಕಾಪಟ್ಟೆ ವೈರಲ್ ಆದ ಸವರ್ಣ ದೀರ್ಘ ಸಂಧಿ ಸಿನಿಮಾದ ಕೊಳಲಾದೇನಾ ಕೃಷ್ಣಾ….ಹಾಡು

ಸಿಕ್ಕಾಪಟ್ಟೆ ವೈರಲ್ ಆದ ಸವರ್ಣ ದೀರ್ಘ ಸಂಧಿ ಸಿನಿಮಾದ ಕೊಳಲಾದೇನಾ ಕೃಷ್ಣಾ….ಹಾಡು

ಇತ್ತೀಚೆಗೆ ಕೊಳಲಾದೇ ನಾ ಕೃಷ್ಣಾ… ಹಾಡು ಎಲ್ಲೆಡೆ ಕೇಳಿ ಬರುತ್ತಿದೆ. ಶ್ರೇಯಾ ಘೋಷಾಲ್ ಕಂಠದಲ್ಲಿ ಮೂಡಿಬಂದಿರುವ ಈ ಹಾಡು ಇನ್ನೇನು ಬಿಡುಗಡೆಯಾಗಲಿರುವ ಸವರ್ಣ ದೀರ್ಘ ಸಂಧೀ ಸಿನಿಮಾದ್ದು.


ಚಾಲಿಪೋಲಿಲು ಎನ್ನುವ ತುಳು ಸಿನಿಮಾದ ನಿರ್ದೇಶಕ ವಿರೇಂದ್ರ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸವರ್ಣ ದೀರ್ಘ ಸಂಧೀ ಸಿನಿಮಾ ಇನ್ನೇನು ತೆರೆಕಾಣಲಿದೆ. ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡು ಶ್ರೇಯಾ ಅಭಿಮಾನಿಗಳನ್ನು ಮಾತ್ರವಲ್ಲದೆ, ಇಡೀ ಕನ್ನಡಾಭಿಮಾನಿಗಳ ಮನಸ್ಸಲ್ಲಿ ಗುನುಗುನಿಸುತ್ತಿದೆ. ಈ ಹಾಡಿಗೆ ಸ್ವತಃ ವಿರೇಂದ್ರ ಶೆಟ್ಟಿಯವರೇ ಸಾಹಿತ್ಯ ನೀಡಿದ್ದಾರೆ.
ಯೂಟ್ಯೂಬ್‌ನಲ್ಲೂ ಸಿಕ್ಕಾಪಟ್ಟೆ ವೀಕ್ಷಕರನ್ನು ಹೊಂದಿರುವ ಈ ಹಾಡು, ಹೆಚ್ಚಿನ ಜನರ ವಾಟ್ಸಪ್ ಸ್ಟೇಟಸ್‌ ಕೂಡಾ ಆಗಿದೆ ಜೊತೆಗೆ ಕಾಲರ್‌ ಟ್ಯೂನ್ ಕೂಡಾ ಆಗಿದೆ. ಈ ಸಿನಿಮಾದ ಲಿರಿಕಲ್ ವಿಡಿಯೋವಂತೂ ಹೆಚ್ಚಿನವರ ಮನಸ್ಸನ್ನು ಕೆಡಿಸಿದೆ. ಇಂತಹ ಅದ್ಭುತ ಹಾಡಿಗೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಒಟ್ಟಾರೆ ಕೊಳಲಾದೇ ನಾ ಕೃಷ್ಣಾ… ಹಾಡು ಯೂಟ್ಯೂಬ್‌ನಲ್ಲಿ ಒಂದು ರೀತಿಯಾ ಹವಾ ಸೃಷ್ಠಿಸಿದೆ ಅಂತಾನೇ ಹೇಳಬಹುದು.

Latest News